ಮಂಗಳವಾರ, ಡಿಸೆಂಬರ್ 22, 2015

ಪ್ರವಾಸ 2015ರ ಸಂಭ್ರಮದ ಕ್ಷಣಗಳು


          ಕೂಟದ ವತಿಯಿಂದ 2015 ರ ಈ ವರ್ಷದಲ್ಲಿ ದಿನಾಂಕ :   29-11-2015    ಭಾನುವಾರ ಒಂದು ದಿನದ ಪ್ರವಾಸವನ್ನು ಅರಸೀಕೆರೆ- (Malekal )ಚಿಕ್ಕ ತಿರುಪತಿ- -ಹಾರನಹಳ್ಳಿ- -ಜಾವಗಲ್ -ಬೆಳವಾಡಿ ಸ್ಥಳಗಳಿಗೆ ಏರ್ಪಡಿಸಲಾಗಿತ್ತು.


  ಬೆಂಗಳೂರು-ಮೈಸೂರಿನಿಂದ ಹೊರಟ ಸದಸ್ಯರು 10 ಗಂಟೆಗೆ ಅರಸೀಕೆರೆ ತಲುಪಿದರು. ಕಾಫಿ-ತಿಂಡಿಯ ನಂತರ ಚಿಕ್ಕತಿರುಪತಿ,ಶ್ರೀವೆಂಕಟರಮಣ, ಶ್ರೀಚಂದ್ರಮೌಳೇಶ್ವರ ದೇವಾಲಯಗಳನ್ನು ನೋಡಿ, ಅಲ್ಲಿಂದ 60ಕಿ. ಮೀ ದೂರದ ಬೆಳವಾಡಿಯಲ್ಲಿರುವ ಶ್ರೀ ವೀರನಾರಾಯಣ, ಶ್ರೀ ಕೃಷ್ಣ, ಶ್ರೀ ನರಸಿಂಹ ದೇವರುಗಳ ದರ್ಶನ ಪಡೆದರು.ಹಾಗೂ ಈ ಅದ್ಭುತ ದೇವಾಲಯವನ್ನು ಕಣ್ತುಂಬಿಕೊಂಡರು. ಅರ್ಚನೆ- ಪೂಜೆಗಳನ್ನು ಮಾಡಿಸಿದರು. ನಂತರ ಜಾವಗಲ್ ನಲ್ಲಿ  ಶ್ರೀ ನರಸಿಂಹ , ಶ್ರೀ ಲಕ್ಷ್ಮಿ ಯರನ್ನು ದರ್ಶನ ಮಾಡಿದರು. ಸ್ತ್ರೀ ಸದಸ್ಯರು ದೇವಿ ಮಹಿಮೆಯ ಹಾಡುಗಳನ್ನು ಹಾಡಿ ಭಕ್ತಿ ಮೆರೆದರು.ಅಲ್ಲಿ ಊಟದ ನಂತರ 40 ಕಿಮೀ ದೂರದ ಹಾರನಹಳ್ಳಿಯಲ್ಲಿರುವ ಶ್ರೀ ಕೇಶವ, ಶ್ರೀ ನರಸಿಂಹ ದೇವರುಗಳ ದೇವಾಲಯವನ್ನು ಸಂದರ್ಶಿಸಿ ಪ್ರವಾಸವನ್ನು ಸಂಜೆ 5.15 ರ ವೇಳೆಗೆ ಮುಗಿಸಿ ಯಶಸ್ವಿಗೊಳಿಸಲಾಯಿತು.
     ಪ್ರವಾಸದ ನಡುವೆ ಸದಸ್ಯರುಗಳು ಮನೆಯಿಂದ ತಂದಿದ್ದ ಕುರುಕಲು ತಿಂಡಿಗಳನ್ನು ಪರಸ್ಪರ ನೀಡಿ ಸಂತಸಪಟ್ಟರು. ನಂತರ ಎಲ್ಲರೂ ತಮ್ಮ ಊರುಗಳತ್ತ ಪ್ರಯಾಣ ಬೆಳೆಸಿದರು. ಹಿಂತಿರುಗುವಾಗ ಇಡೀ ಪ್ರವಾಸದಲ್ಲಿ ಕು. ಸಿರಿಯವರು ಎಲ್ಲರನ್ನು ತನ್ನ ಮುದ್ದುಮಾತುಗಳಿಂದ ಮಂತ್ರಮುಗ್ಧಗೊಳಿಸಿ ರಂಜಿಸುತ್ತಿದ್ದುದು ಚೇತೋಹಾರಿಯಾಗಿತ್ತು.


















 

ಸೋಮವಾರ, ನವೆಂಬರ್ 9, 2015

ದೀಪಾವಳಿ ಶುಭಾಷಯಗಳು


 













 ಶ್ರೀನಿಧಿ.ಮಂಗಳೂರು ಇವರ ಕವನದ ಮೂಲಕ 

ಎಲ್ಲರಿಗೂ, ಹಣತೆಗಳ ಹಬ್ಬ ದೀಪಾವಳಿಯ ಶುಭಾಷಯಗಳು ಹಬ್ಬಗಳ ರಾಜ ದೀಪಾವಳಿಸಮಸ್ತರಿಗೂ ಸುಖ, ಶಾಂತಿ, ನೆಮ್ಮದಿ ತರಲಿ .

ಶ್ರಾವಣನ ಹಿಂದೆಯೇ ಕಾರ್ತೀಕ ಬರುತಿಹನು,                          ಮಾಸಗಳ ಮನೆಯೊಳಗೆ                                    ಬೆಳಕ ಬುಟ್ಟಿಯ ಹೊತ್ತು , ನೋಡಿರಲ್ಲಿ||1||           

ಕತ್ತಲನು ಓಡಿಸುವ, 
ದೀವಿಗೆಯೂ ಜೊತೆಯಿಹುದು  
 
ಜ್ನಾನ ದೀಪವನೆಲ್ಲ ಹಚ್ಚ ಬನ್ನಿ||2||  
ದಾರಿ ಬಿಡಿ ಆತನಿಗೆ, 
ಮನದ ಕದವನು ತೆರೆದು  ಹರುಷದಾ ಮೊಗದಲ್ಲಿ ಒಳಗೆ ಕರೆತನ್ನಿ||3|| 

ಭಾನುವಾರ, ಆಗಸ್ಟ್ 23, 2015

ಕೂಟದ ವಾರ್ಷಿಕ ಸಭೆಯ ದೃಶ್ಯಾವಳಿಗಳು

ಕೂಟದ ವಾರ್ಷಿಕ ಸಭೆಯ ದೃಶ್ಯಾವಳಿಗಳು

ಫ್ರೂಟ್ ಪಂಚ್ ಆಟದ ವಿಡಿಯೊ

ಪ್ರವೃತ್ತಿ ಕುರಿತು ಶ್ರೀ ವಿಕ್ರಮ ಪದಕಿ ಯವರೊಂದಿಗೆ ಸಂವಾದದ  ವಿಡಿಯೊ



ಬ್ಲಾಗ್ ವೀಕ್ಷಿಸಿದವರು   ದಯವಿಟ್ಟು 2 ಸಾಲು ಕಾಮೆಂಟ್ ಎಂಬ ಟಾನಿಕ್ ಗಳನ್ನು  ಹಾಗೆಯೇ ಹನಿಸಿಬಿಡಿ.

ಕಥೆ ಅಲ್ಲ... ಕಟುಸತ್ಯ...

ಆತಂಕವಾಗಿದ್ದು ನಿಜ, 
  ನಮ್ಮ ಕೂಟದ ಸದಸ್ಯರೊಬ್ಬರ ಪತ್ನಿಯವರಿಗೆ ಹೀಗೆ ಇದ್ದಕ್ಕಿದ್ದಂತೆ ಅನಾರೋಗ್ಯ ಕಾಡಿದಾಗ ಎಲ್ಲರೂ ಮೌನವಾಗಿ ದೈವಕ್ಕೆ ಮೊರೆಯಿಟ್ಟದ್ದು ಸುಳ್ಳಲ್ಲ. ಆದರೆ ದೇವರು ಈ ರೂಪದಲ್ಲಿ ಇಷ್ಟು ಬೇಗ ಕರುಣೆ ತೋರಿದ ಎಂದರೆ ಇದು ಕಥೆ ಅಲ್ಲ... ಕಟುಸತ್ಯ.. ಆ ದೈವ ರೂಪವೇ ಭಾರತೀಯ ಯೋಗ ಪದ್ಧತಿ...... ಕೂಟದ ಅಧ್ಯಕ್ಷರಾದ ಶ್ರೀ ನಾ.ನಾರಾಯಣರವರು ಸಮಾರಂಭದಲ್ಲಿ ಭಾಗವಹಿಸಿ ಯೋಗಾಸನಗಳ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ಆ ಅದ್ಭುತ ದೃಶ್ಯಗಳು ನಿಮ್ಮ ಮುಂದೆ...











2015-16, 9ನೇ ವಾರ್ಷಿಕ ಸಭೆಯ ದೃಶ್ಯಾವಳಿಗಳು


ಹಿರಿಯರ ಸ್ಮರಣೆ ಹೀಗೆ ಮಾಡೋಣ  (ಒಂದು ವಿಡಿಯೋ)
ದಿನಾಂಕ:16-08-2015
ಸ್ಥಳ:ಶ್ರೀ ಜಯಸಿಂಹರವರ ಸ್ವಗೃಹ, ಸಹಕಾರನಗರ,ಬೆಂಗಳೂರು


2015-16, 9ನೇ ವಾರ್ಷಿಕ ಸಭೆಯ ದೃಶ್ಯಾವಳಿಗಳು

ಕು||ಅಭಿಜ್ಞಳಿಂದ ದೇವತಾ ಪ್ರಾರ್ಥನೆ

ಸಾಮೂಹಿಕ ಪ್ರಾರ್ಥನೆ ನಡೆಸಿಕೊಟ್ಟ ಡಿ.ಅನಂತಾಚಾರ್ ರವರಿಂದ ಸ್ವಾಗತ

ಸಭಾ ಅಧ್ಬಕ್ಷರಾಗಿ ಶ್ರೀ ಜಯಸಿಂಹ,ಕಾರ್ಯಕ್ರಮಗಳ ಮೇಲ್ವಿಚಾರಕರಾಗಿ ಶ್ರೀ ಸುದರ್ಶನ್ ವೇದಿಕೆಯಲ್ಲಿ

ಹಿರಿಯ ಸದಸ್ಯೆಯರು

ಆಟಗಳ ಕುರಿತು ಒಂದು ಚರ್ಚೆ

ಕು||ಅಮೃತಾಳಿಂದ ಒಂದು ಕೀರ್ತನೆ

ಹಿರಿಯರ ನೆನಪಿನಲ್ಲಿ

ಪುರುಷರ 'ಹಿಟ್ಟಿಂಗ್ ದ ಬಾಲ್' ಆಟ-ನೇತೃತ್ವ-ಶ್ರೀ ವಿಕ್ರಮ ಪದಕಿ,

ಪುರುಷರ 'ಫ್ರೂಟ್ ಪಂಚ್' ಆಟ-ನೇತೃತ್ವ-ಶ್ರೀಮತಿ ಮನೋರಮ

ಪುರುಷರ 'ಫ್ರೂಟ್ ಪಂಚ್' ಆಟದ ನೋಟ

ಕು||ಸಿಂಚನಾಳ ಸಡಗರ

ಪುರುಷ ಮತ್ತು ಮಹಿಳೆಯರು ಕೂಡಿ ಆಡಿದ ಡೈಸ್ ಮತ್ತು ಮಲ್ಟಿಪಲ್ಸ್ ಆಫ್ ಫೈವ್ ಆಟ ನೇತೃತ್ವ-ಡಿ.ಅನಂತಾಚಾರ್

ಸಭಾ ಕಾರ್ಯಕ್ರಮ

ಸಭಾ ಕಾರ್ಯಕ್ರಮ

ಶ್ರೀ ರಘುನಾಥರಾವ್ ರವರಿಗೆ ಕೂಟದ ವತಿಯಿಂದ ಸನ್ಮಾನ- ನಡೆಸಿಕೊಟ್ಟವರು-ಶ್ರೀಜಯಸಿಂಹ,ಮತ್ತುಶ್ರೀ ಕೃಷ್ಣಮೂರ್ತಿ

ಅಧ್ಯಕ್ಷರಿಂದ ಸದಾಶಯ ನುಡಿಗಳು


ಅಧ್ಯಕ್ಷರ ಕಡೆಯಿಂದ ಹಿರಿಯರಿಗೆ ವೈಯಕ್ತಿಕ ಸನ್ಮಾನ

ಅಧ್ಯಕ್ಷರ ಕಡೆಯಿಂದ ಹಿರಿಯರಿಗೆ ವೈಯಕ್ತಿಕ ಸನ್ಮಾನ

ಶ್ರೀ ವೆಂಕಟೇಶ್ ರವರಿಂದ ಹಿರಿಯರ ಗುಣಗಾನ

ಶ್ರೀ ರಮೇಶ್ ರವರಿಂದ ಹಿರಿಯರ ಗುಣಗಾನ

ಜಾಯ್ನಿಂಗ್ ದ ಪಿನ್ಸ್ ಆಟದಲ್ಲಿ  ಕು||ಸಿರಿ - ತೃತೀಯ

ಜಾಯ್ನಿಂಗ್ ದ ಪಿನ್ಸ್ ಆಟದಲ್ಲಿ  ಕು||ಅಭಿಜ್ಞ-ಪ್ರಥಮ


ಮಹಿಳೆಯರ 'ಹಿಟ್ಟಿಂಗ್ ದ ಬಾಲ್' ಆಟ ಕು||ಅಮೃತಾ ಪ್ರಥಮ 
 ಪುರುಷರ 'ಹಿಟ್ಟಿಂಗ್ ದ ಬಾಲ್' ಆಟ ಕು|| ಭರತ್-ಪ್ರಥಮ

ಪುರುಷರ 'ಫ್ರೂಟ್ ಪಂಚ್' ಆಟ- ಶ್ರೀವಿಕ್ರಮಪದಕಿ-ಪ್ರಥಮ

ಮಹಿಳೆಯರ 'ಫ್ರೂಟ್ ಪಂಚ್' ಆಟ- ಶ್ರೀಮತಿ ವಸಂತಲಕ್ಷ್ಮಿ-ಪ್ರಥಮ

ಮಲ್ಟಿಪಲ್ಸ್ ಆಫ್ ಫೈವ್ ಆಟದಲ್ಲಿ -ಶ್ರೀಮತಿ ವಾಸಂತಿ- ಪ್ರಥಮ

ಮಲ್ಟಿಪಲ್ಸ್ ಆಫ್ ಫೈವ್ ಆಟದಲ್ಲಿ -ಶ್ರೀಮಧುಸೂದನ್- ದ್ವಿತೀಯ

ಡೈಸ್ ಆಟದಲ್ಲಿ ಕು||ಅನಿಲ್ ಕಶ್ಯಪ್ - ಪ್ರಥಮ

ಡೈಸ್ ಆಟದಲ್ಲಿ ಕು||ವರುಣ್ -ದ್ವಿತೀಯ

ಬಾಂಬ್ ಇನ್ ದ ಸಿಟಿ ಕು||ಅಮಿತ್- ಪ್ರಥಮ

ಬಾಂಬ್ ಇನ್ ದ ಸಿಟಿ ಶ್ರೀಮತಿ ವಸಂತಲಕ್ಷ್ಮಿ- ಪ್ರಥಮ

ಶ್ರೀಮತಿ ಕೃಷ್ಣವೇಣಿರವರಿಂದ 3 ಆಟಗಳ ಬಹುಮಾನ ಪ್ರಾಯೋಜಕತ್ವ

ಲಕ್ಕಿ ಸ್ಟಾರ್ ವಿನ್ನರ್ ಹಾಗೂ ಉತ್ತೇಜಕ ಧನಸಹಾಯ ಪಡೆದ ಕು|| ಅವಿನಾಶ್

ವೃತ್ತಿ-ಪ್ರವೃತ್ತಿ ಮಾಲಿಕೆ-1ರಲ್ಲಿ ವೃತ್ತಿ ಕುರಿತು ಸಂವಾದದಲ್ಲಿ ಶ್ರೀಮತಿ ವೀಣಾ ಸುಬ್ಬರಾವ್

ಸಂವಾದದಲ್ಲಿ ಭಾಗಿಗಳು

ಸಂವಾದದಲ್ಲಿ ಭಾಗಿಗಳು

ಸೌಹಾರ್ದ ಸಂಭ್ರಮ ಎಂದರೆ ಇದೇ ಏನು?

ಊಟೋಪಚಾರ

ಸಂಭ್ರಮದ ನಡುವೆ ಬಿಡುವು

ಊಟೋಪಚಾರ

ವೃತ್ತಿ-ಪ್ರವೃತ್ತಿ ಮಾಲಿಕೆ-1ರಲ್ಲಿ ಪ್ರವೃತ್ತಿ ಕುರಿತು ಸಂವಾದದಲ್ಲಿ ಶ್ರೀ ವಿಕ್ರಮಪದಕಿ

 ವಾರ್ಷಿಕ ಸಭೆಯನ್ನು  ಮಂಗಳ ಗೀತೆಯೊಂದಿಗೆ  ಪರಿಸಮಾಪ್ತಿ ಮಾಡಿದ ಶ್ರೀಮತಿ ಚಂಚುಲಕ್ಷ್ಮಿ