ಸೋಮವಾರ, ಫೆಬ್ರವರಿ 16, 2015

ಶಿವರಾತ್ರಿ ದಿನದ ವಿಶೇಷಗಳು

ಶಿವರಾತ್ರಿ ದಿನದ ವಿಶೇಷಗಳು

1.ಶಿವರಾತ್ರಿಯು ಭಾರತದ ಎಲ್ಲಾ ಭಾಗಗಳಲ್ಲಿ ಆಚರಿಸಲ್ಪಡುವ ಹಬ್ಬ. ಈ ಹಬ್ಬವು ವ್ರತರಾಜ, ಉಪವಾಸದ ಹಬ್ಬ ಎಂದು ಖ್ಯಾತವಾಗಿದೆ.

2.ರಾತ್ರಿ ಕಾಲ ದೇವತಾ ಪೂಜೆಗೆ ಪ್ರಶಸ್ತವಲ್ಲ ಎನ್ನುತ್ತಾರೆ. ಆದರೆ ಶಿವರಾತ್ರಿಯು ರಾತ್ರಿ ಕಾಲದಲ್ಲೇ ಜಾವಗಳ ಪೂಜೆಗೆ ಪ್ರಸಿದ್ಧವಾಗಿದೆ.

3.ಇದು ಮಾಘ-ಪಾಲ್ಗುಣ ಮಾಸಗಳ ಮಧ್ಯೆ ಬರುತ್ತದೆ.

4.ಈ ಹಬ್ಬ ಕಾಲ ವಿಶೇಷದ ಮಹತ್ವವನ್ನು ಒಳಗೊಂಡಿದೆ. ಹೆಚ್ಚು ಸಮಯ ಪೂಜೆ ಧ್ಯಾನಕ್ಕೆ ವಿನಿಯೋಗವಾಗುತ್ತದೆ.

5.ಶೈವನಾಗಲೀ, ವೈಷ್ಣವನಾಗಲೀ, ಇತರ ಯಾವುದೇ ದೇವತೆಯ ಉಪಾಸಕನಾಗಲೀ ಶಿವರಾತ್ರಿಯ ವಿಷಯದಲ್ಲಿ ಬಹಿರ್ಮುಖನಾಗಿದ್ದರೆ ಆತನ ಎಲ್ಲಾ ಪೂಜಾಫಲವೂ ನಾಶವಾಗುತ್ತದೆ.(ರುದ್ರಸಂಹಿತಾ)

6.ಶಿವರಾತ್ರಿಯ ಮಹಿಮೆಯನ್ನು ಹೀಗೆ ಹೇಳಲಾಗಿದೆ." ಅಂದು ಉಪವಾಸ ಮಾಡಿ ಜಾಗರಣೆಯಲ್ಲಿದ್ದು ಬಿಲ್ವಪತ್ರಗಳಿಂದ ಶಿವನನ್ನು ನಾಲ್ಕು ಯಾಮಗಳಲ್ಲಿ ಪೂಜಿಸುವವರು ಶಿವನಿಗೇ ಸಮನಾಗಿಬಿಡುತ್ತಾರೆ. (ರುದ್ರಸಂಹಿತಾ)

7.ಬ್ರಹ್ಮ ವಿಷ್ಣುಗಳಾದಿಯಾಗಿ ಮಹಾದೇವನನ್ನು  ಅರುಣಾಚಲದಲ್ಲಿ ಪೂಜಿಸಿದ ಅಗ್ಗಳಿಕೆಯದಿನ. (ಶಿವಪುರಾಣ)

8.ವಿಶ್ವೇಶ್ವರ ಸಂಹಿತಾ ಹೇಳುವುದೇನೆಂದರೆ:
ವಿಚಾರ್ಯ ಸರ್ವ ಶಾಸ್ತ್ರಾಣಿ ಧರ್ಮಂಶ್ಚೈವಾಪ್ಯನೇಕಶ:| ಶಿವರಾತ್ರಿಮಿದಂ ಸರ್ವೋತ್ಕೃಷ್ಟಂ ಪ್ರಕೀರ್ತನಂ ||
ಎಲ್ಲಾ ಶಾಸ್ತ್ರಗಳನ್ನು ವಿಚಾರ ಮಾಡಿದೆವು. ಎಲ್ಲಾ ಧರ್ಮಗಳನ್ನು ವಿಮರ್ಶೆ ಮಾಡಿದೆವು. ಅಂತಿಮ ನಿರ್ಣಯವೇನೆಂದರೆ ಶಿವರಾತ್ರಿ ವ್ರತವು ಸರ್ವೋತ್ತಮವಾದುದು.
9.ಭಗವಂತನ ಕಾಲರೂಪವೇ ಶಿವ, ಅದಕ್ಕೆ ಶಿವನು ಮಹಾಕಾಲ.
  ಶಿವನು ಧ್ಯಾನಾನಂದ, ಆತ್ಮಗುಣ ಸಂಪತ್ತು- ಸರ್ವಭೂತಗಳಲ್ಲಿ ದಯೆ ಆತನಿಗೆ ಪ್ರಿಯ.

10.ಋಗ್ವೇದ- ನ ವಾ ಓ ಜೀಯೇ ರುದ್ರ ತ್ಯಪಸ್ತಿ - ರುದ್ರನಿಗಿಂತ ತೇಜಸ್ವಿಯಾದವನು ಇಲ್ಲ.
   ಸ್ತುಹಿ ಶ್ರುತಂ ಗರ್ತಸರಂ ಯುವಾನಂ- ರುದ್ರನು ಪ್ರಸಿದ್ಧನು ಗುಹೆಯಲ್ಲಿ ಅಡಗಿರುವವನು.
 
ಶಿವರಾತ್ರಿ ಎಲ್ಲರಿಗೂ ಮಂಗಳವನ್ನುಂಟುಮಾಡಲಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ