ಮಂಗಳವಾರ, ಡಿಸೆಂಬರ್ 22, 2015

ಪ್ರವಾಸ 2015ರ ಸಂಭ್ರಮದ ಕ್ಷಣಗಳು


          ಕೂಟದ ವತಿಯಿಂದ 2015 ರ ಈ ವರ್ಷದಲ್ಲಿ ದಿನಾಂಕ :   29-11-2015    ಭಾನುವಾರ ಒಂದು ದಿನದ ಪ್ರವಾಸವನ್ನು ಅರಸೀಕೆರೆ- (Malekal )ಚಿಕ್ಕ ತಿರುಪತಿ- -ಹಾರನಹಳ್ಳಿ- -ಜಾವಗಲ್ -ಬೆಳವಾಡಿ ಸ್ಥಳಗಳಿಗೆ ಏರ್ಪಡಿಸಲಾಗಿತ್ತು.


  ಬೆಂಗಳೂರು-ಮೈಸೂರಿನಿಂದ ಹೊರಟ ಸದಸ್ಯರು 10 ಗಂಟೆಗೆ ಅರಸೀಕೆರೆ ತಲುಪಿದರು. ಕಾಫಿ-ತಿಂಡಿಯ ನಂತರ ಚಿಕ್ಕತಿರುಪತಿ,ಶ್ರೀವೆಂಕಟರಮಣ, ಶ್ರೀಚಂದ್ರಮೌಳೇಶ್ವರ ದೇವಾಲಯಗಳನ್ನು ನೋಡಿ, ಅಲ್ಲಿಂದ 60ಕಿ. ಮೀ ದೂರದ ಬೆಳವಾಡಿಯಲ್ಲಿರುವ ಶ್ರೀ ವೀರನಾರಾಯಣ, ಶ್ರೀ ಕೃಷ್ಣ, ಶ್ರೀ ನರಸಿಂಹ ದೇವರುಗಳ ದರ್ಶನ ಪಡೆದರು.ಹಾಗೂ ಈ ಅದ್ಭುತ ದೇವಾಲಯವನ್ನು ಕಣ್ತುಂಬಿಕೊಂಡರು. ಅರ್ಚನೆ- ಪೂಜೆಗಳನ್ನು ಮಾಡಿಸಿದರು. ನಂತರ ಜಾವಗಲ್ ನಲ್ಲಿ  ಶ್ರೀ ನರಸಿಂಹ , ಶ್ರೀ ಲಕ್ಷ್ಮಿ ಯರನ್ನು ದರ್ಶನ ಮಾಡಿದರು. ಸ್ತ್ರೀ ಸದಸ್ಯರು ದೇವಿ ಮಹಿಮೆಯ ಹಾಡುಗಳನ್ನು ಹಾಡಿ ಭಕ್ತಿ ಮೆರೆದರು.ಅಲ್ಲಿ ಊಟದ ನಂತರ 40 ಕಿಮೀ ದೂರದ ಹಾರನಹಳ್ಳಿಯಲ್ಲಿರುವ ಶ್ರೀ ಕೇಶವ, ಶ್ರೀ ನರಸಿಂಹ ದೇವರುಗಳ ದೇವಾಲಯವನ್ನು ಸಂದರ್ಶಿಸಿ ಪ್ರವಾಸವನ್ನು ಸಂಜೆ 5.15 ರ ವೇಳೆಗೆ ಮುಗಿಸಿ ಯಶಸ್ವಿಗೊಳಿಸಲಾಯಿತು.
     ಪ್ರವಾಸದ ನಡುವೆ ಸದಸ್ಯರುಗಳು ಮನೆಯಿಂದ ತಂದಿದ್ದ ಕುರುಕಲು ತಿಂಡಿಗಳನ್ನು ಪರಸ್ಪರ ನೀಡಿ ಸಂತಸಪಟ್ಟರು. ನಂತರ ಎಲ್ಲರೂ ತಮ್ಮ ಊರುಗಳತ್ತ ಪ್ರಯಾಣ ಬೆಳೆಸಿದರು. ಹಿಂತಿರುಗುವಾಗ ಇಡೀ ಪ್ರವಾಸದಲ್ಲಿ ಕು. ಸಿರಿಯವರು ಎಲ್ಲರನ್ನು ತನ್ನ ಮುದ್ದುಮಾತುಗಳಿಂದ ಮಂತ್ರಮುಗ್ಧಗೊಳಿಸಿ ರಂಜಿಸುತ್ತಿದ್ದುದು ಚೇತೋಹಾರಿಯಾಗಿತ್ತು.