ಭಾನುವಾರ, ಮಾರ್ಚ್ 6, 2016

ಶಿವರಾತ್ರಿ ಹಬ್ಬದ ದಿನ ಶಿವನ ಸ್ಮರಣೆ ಮಾಡುತ್ತಾ.....

     

-ಕ.ವೆಂ.ನಾಗರಾಜ್. ರವರ ಲೇಖನದೊಂದಿಗೆ.......

ಶಿವರಾತ್ರಿ ಹಬ್ಬದ ಶುಭಾಶಯಗಳು

ಜ್ಞಾನೋದಯವಾಗಬೇಕಾದ ದಿನ - ಶಿವರಾತ್ರಿ

     ಶಿವರಾತ್ರಿ- ಪರಮಾತ್ಮನನ್ನು ಅರಿಯುವ, ನಮ್ಮನ್ನು ನಾವು ಅರಿತುಕೊಳ್ಳುವ ಕ್ರಿಯೆಗೆ ಚಾಲನೆ ಕೊಡುವ ದಿನವೆಂದರೆ ಸೂಕ್ತವಾದೀತು. ಶಿವರಾತ್ರಿ ವಿಶೇಷವಾದ ಜಾಗರಣೆ ಎಂದರೆ ಜಾಗೃತರಾಗುವುದು, ಎಚ್ಚರಗೊಳ್ಳುವುದು, ಅರಿಯುವುದು ಎಂದೇ ತಿಳಿಯೋಣ, ಕೇವಲ ನಿದ್ರೆ ಮಾಡದಿರುವುದಲ್ಲ. ಶಿವ, ಶಂಭು, ಶಂಕರ, ಹರ, ಮಹಾದೇವ, ಇತ್ಯಾದಿಗಳು ಒಬ್ಬನೇ ದೇವನ ಗುಣವಿಶೇಷಗಳೇ ಹೊರತು ಮತ್ತೇನಲ್ಲ. "ಏಕಂ ಸತ್ ವಿಪ್ರಾಃ ಬಹುಧಾ ವದಂತಿ"- ಸತ್ಯ ಒಂದೇ, ಪ್ರಜ್ಞಾವಂತರು ಅದನ್ನು ಬಹು ರೀತಿಯಲ್ಲಿ ಹೇಳುತ್ತಾರೆ. 'ದೇವನೊಬ್ಬ, ನಾಮ ಹಲವು' ಎಂಬುದು ಸನಾತನ ಧರ್ಮದ ನಿಲುವಾಗಿದೆ. ಹಾಗೆಯೇ 'ಗುರಿಯೊಂದೇ, ದಾರಿಗಳು ಹಲವು' ಎಂಬುದನ್ನೂ ನಾವು ಅರಿತು ಅರಗಿಸಿಕೊಳ್ಳಬೇಕಿದೆ. ದೇವರು ಒಬ್ಬನೇ ಎಂಬುದನ್ನು ಬಹುತೇಕರು ಒಪ್ಪುತ್ತಾರೆ.

    ಪ್ರತಿ ಧರ್ಮವೂ ತನ್ನದೇ ಆದ ರೀತಿಯಲ್ಲಿ ಜಗತ್ತು, ಜೀವ, ದೇವರನ್ನು ವಿವರಿಸುತ್ತದೆ. ಯಾವ ಧರ್ಮ ಏನೇ ಹೇಳಲಿ, ಅವುಗಳನ್ನು ನಾವು ಹೇಗೆಯೇ ಅರ್ಥ ಮಾಡಿಕೊಳ್ಳಲಿ ಅದರಿಂದ ಜಗತ್ತು, ಜೀವ, ದೇವರು ಬದಲಾಗುವುದಿಲ್ಲ. ಆದರೆ, ಈ ಸಮಾಜದಲ್ಲಿ ಬಾಳುತ್ತಿರುವ ನಾವು, ಪಂಚಭೂತಗಳಿಂದ-ಜಲ, ವಾಯು, ಆಕಾಶ, ಅಗ್ನಿ, ನೆಲ- ಒಡಗೂಡಿ ನಮ್ಮೊಳಗೆ ಚೈತನ್ಯರೂಪಿ ಆತ್ಮವನ್ನು ಹೊಂದಿರುವ ನಾವು, ಪಂಚಭೂತಗಳಿಂದಲೇ ನಮ್ಮ ಅಭಿವೃದ್ಧಿ ಹೊಂದಿರುವುದನ್ನು, ಹೊಂದುತ್ತಿರುವುದನ್ನು ಅರಿತು ಆ ಕುರಿತು ಕೃತಜ್ಞತಾಭಾವ ಹೊಂದಿರುವುದು, ಇವೆಲ್ಲದಕ್ಕೂ ಕಾರಣಕರ್ತವಾದ ಆ ಮಹಾನ್ ಶಕ್ತಿಗೆ ನಮಿಸುವುದು ನಾವು ಮಾಡಬೇಕಾದ ಕರ್ತವ್ಯವಾಗಿದೆ. ಈ ಪಂಚಭೂತಗಳಾದ ನೆಲ, ಜಲ, ವಾಯು, ಅಗ್ನಿ, ಆಕಾಶಗಳನ್ನು ಹಾಳು ಮಾಡದೆ, ಕಲುಷಿತಗೊಳಿಸದೆ ನಮ್ಮ ಮುಂದಿನವರಿಗೂ ಉಳಿಸಿ, ಸಂರಕ್ಷಿಸುವುದು ಆ ಪರಮಾತ್ಮನ ನಿಜವಾದ ಪೂಜೆಯಾಗುತ್ತದೆ. ಎಲ್ಲರಲ್ಲೂ, ಎಲ್ಲದರಲ್ಲೂ ದೇವನನ್ನು ಕಾಣೋಣ, ಪೂಜಿಸೋಣ. ಇಂತಹ ಪೂಜೆಯಿಂದ ಆನಂದ, ತೃಪ್ತಿ ಸಿಗದೇ ಇರುವುದಿಲ್ಲ. ಆ ಮಂಗಳಮಯ ಶಿವನನ್ನು ನಮ್ಮಲ್ಲಿ ಆತ್ಮದ ಅರಿವನ್ನುಂಟು ಮಾಡು ಎಂದು ಈ ಶುಭ ಸಂದರ್ಭದಲ್ಲಿ ಪ್ರಾರ್ಥಿಸೋಣ.
ಓಂ ನಮಃ ಶಂಭವಾಯ ಚ ಮಯೋಭವಾಯ ಚ
ನಮಃ ಶಂಕರಾಯ ಚ ಮಯಸ್ಕರಾಯ ಚ
ನಮಃ ಶಿವಾಯ ಚ ಶಿವತರಾಯ ಚ || (ಯಜು. ೧೬.೪೧)
     ಈ ಮಂತ್ರದ ಅರ್ಥ ಹೀಗಿದೆ: ಶಾಂತಿ ಸ್ವರೂಪನಿಗೆ ನಮಸ್ಕಾರ, ಮತ್ತು ಹಾಗೆಯೇ ಆನಂದ ಸ್ವರೂಪನಿಗೆ ನಮಸ್ಕಾರ. ಶಾಂತಿಕಾರಕನಿಗೆ ನಮಸ್ಕಾರ. ಹಾಗೆಯೇ ಆನಂದಕಾರಕನಿಗೆ ನಮಸ್ಕಾರ. ಮಂಗಳ ಸ್ವರೂಪನಿಗೆ ನಮಸ್ಕಾರ. ಅಂತೆಯೇ ಮಂಗಳತರ ಸ್ವರೂಪನಿಗೆ ನಮಸ್ಕಾರ.
-ಕ.ವೆಂ.ನಾಗರಾಜ್.
 (ಕ.ವೆಂ.ನಾಗರಾಜ್. ರವರಲ್ಲಿ ಕ್ಷಮೆಕೋರುತ್ತಾ..ಧನ್ಯವಾದಗಳೊಂದಿಗೆ.)

ಮಂಗಳವಾರ, ಡಿಸೆಂಬರ್ 22, 2015

ಪ್ರವಾಸ 2015ರ ಸಂಭ್ರಮದ ಕ್ಷಣಗಳು


          ಕೂಟದ ವತಿಯಿಂದ 2015 ರ ಈ ವರ್ಷದಲ್ಲಿ ದಿನಾಂಕ :   29-11-2015    ಭಾನುವಾರ ಒಂದು ದಿನದ ಪ್ರವಾಸವನ್ನು ಅರಸೀಕೆರೆ- (Malekal )ಚಿಕ್ಕ ತಿರುಪತಿ- -ಹಾರನಹಳ್ಳಿ- -ಜಾವಗಲ್ -ಬೆಳವಾಡಿ ಸ್ಥಳಗಳಿಗೆ ಏರ್ಪಡಿಸಲಾಗಿತ್ತು.


  ಬೆಂಗಳೂರು-ಮೈಸೂರಿನಿಂದ ಹೊರಟ ಸದಸ್ಯರು 10 ಗಂಟೆಗೆ ಅರಸೀಕೆರೆ ತಲುಪಿದರು. ಕಾಫಿ-ತಿಂಡಿಯ ನಂತರ ಚಿಕ್ಕತಿರುಪತಿ,ಶ್ರೀವೆಂಕಟರಮಣ, ಶ್ರೀಚಂದ್ರಮೌಳೇಶ್ವರ ದೇವಾಲಯಗಳನ್ನು ನೋಡಿ, ಅಲ್ಲಿಂದ 60ಕಿ. ಮೀ ದೂರದ ಬೆಳವಾಡಿಯಲ್ಲಿರುವ ಶ್ರೀ ವೀರನಾರಾಯಣ, ಶ್ರೀ ಕೃಷ್ಣ, ಶ್ರೀ ನರಸಿಂಹ ದೇವರುಗಳ ದರ್ಶನ ಪಡೆದರು.ಹಾಗೂ ಈ ಅದ್ಭುತ ದೇವಾಲಯವನ್ನು ಕಣ್ತುಂಬಿಕೊಂಡರು. ಅರ್ಚನೆ- ಪೂಜೆಗಳನ್ನು ಮಾಡಿಸಿದರು. ನಂತರ ಜಾವಗಲ್ ನಲ್ಲಿ  ಶ್ರೀ ನರಸಿಂಹ , ಶ್ರೀ ಲಕ್ಷ್ಮಿ ಯರನ್ನು ದರ್ಶನ ಮಾಡಿದರು. ಸ್ತ್ರೀ ಸದಸ್ಯರು ದೇವಿ ಮಹಿಮೆಯ ಹಾಡುಗಳನ್ನು ಹಾಡಿ ಭಕ್ತಿ ಮೆರೆದರು.ಅಲ್ಲಿ ಊಟದ ನಂತರ 40 ಕಿಮೀ ದೂರದ ಹಾರನಹಳ್ಳಿಯಲ್ಲಿರುವ ಶ್ರೀ ಕೇಶವ, ಶ್ರೀ ನರಸಿಂಹ ದೇವರುಗಳ ದೇವಾಲಯವನ್ನು ಸಂದರ್ಶಿಸಿ ಪ್ರವಾಸವನ್ನು ಸಂಜೆ 5.15 ರ ವೇಳೆಗೆ ಮುಗಿಸಿ ಯಶಸ್ವಿಗೊಳಿಸಲಾಯಿತು.
     ಪ್ರವಾಸದ ನಡುವೆ ಸದಸ್ಯರುಗಳು ಮನೆಯಿಂದ ತಂದಿದ್ದ ಕುರುಕಲು ತಿಂಡಿಗಳನ್ನು ಪರಸ್ಪರ ನೀಡಿ ಸಂತಸಪಟ್ಟರು. ನಂತರ ಎಲ್ಲರೂ ತಮ್ಮ ಊರುಗಳತ್ತ ಪ್ರಯಾಣ ಬೆಳೆಸಿದರು. ಹಿಂತಿರುಗುವಾಗ ಇಡೀ ಪ್ರವಾಸದಲ್ಲಿ ಕು. ಸಿರಿಯವರು ಎಲ್ಲರನ್ನು ತನ್ನ ಮುದ್ದುಮಾತುಗಳಿಂದ ಮಂತ್ರಮುಗ್ಧಗೊಳಿಸಿ ರಂಜಿಸುತ್ತಿದ್ದುದು ಚೇತೋಹಾರಿಯಾಗಿತ್ತು.


















 

ಸೋಮವಾರ, ನವೆಂಬರ್ 9, 2015

ದೀಪಾವಳಿ ಶುಭಾಷಯಗಳು


 













 ಶ್ರೀನಿಧಿ.ಮಂಗಳೂರು ಇವರ ಕವನದ ಮೂಲಕ 

ಎಲ್ಲರಿಗೂ, ಹಣತೆಗಳ ಹಬ್ಬ ದೀಪಾವಳಿಯ ಶುಭಾಷಯಗಳು ಹಬ್ಬಗಳ ರಾಜ ದೀಪಾವಳಿಸಮಸ್ತರಿಗೂ ಸುಖ, ಶಾಂತಿ, ನೆಮ್ಮದಿ ತರಲಿ .

ಶ್ರಾವಣನ ಹಿಂದೆಯೇ ಕಾರ್ತೀಕ ಬರುತಿಹನು,                          ಮಾಸಗಳ ಮನೆಯೊಳಗೆ                                    ಬೆಳಕ ಬುಟ್ಟಿಯ ಹೊತ್ತು , ನೋಡಿರಲ್ಲಿ||1||           

ಕತ್ತಲನು ಓಡಿಸುವ, 
ದೀವಿಗೆಯೂ ಜೊತೆಯಿಹುದು  
 
ಜ್ನಾನ ದೀಪವನೆಲ್ಲ ಹಚ್ಚ ಬನ್ನಿ||2||  
ದಾರಿ ಬಿಡಿ ಆತನಿಗೆ, 
ಮನದ ಕದವನು ತೆರೆದು  ಹರುಷದಾ ಮೊಗದಲ್ಲಿ ಒಳಗೆ ಕರೆತನ್ನಿ||3|| 

ಭಾನುವಾರ, ಆಗಸ್ಟ್ 23, 2015

ಕೂಟದ ವಾರ್ಷಿಕ ಸಭೆಯ ದೃಶ್ಯಾವಳಿಗಳು

ಕೂಟದ ವಾರ್ಷಿಕ ಸಭೆಯ ದೃಶ್ಯಾವಳಿಗಳು

ಫ್ರೂಟ್ ಪಂಚ್ ಆಟದ ವಿಡಿಯೊ

ಪ್ರವೃತ್ತಿ ಕುರಿತು ಶ್ರೀ ವಿಕ್ರಮ ಪದಕಿ ಯವರೊಂದಿಗೆ ಸಂವಾದದ  ವಿಡಿಯೊ



ಬ್ಲಾಗ್ ವೀಕ್ಷಿಸಿದವರು   ದಯವಿಟ್ಟು 2 ಸಾಲು ಕಾಮೆಂಟ್ ಎಂಬ ಟಾನಿಕ್ ಗಳನ್ನು  ಹಾಗೆಯೇ ಹನಿಸಿಬಿಡಿ.

ಕಥೆ ಅಲ್ಲ... ಕಟುಸತ್ಯ...

ಆತಂಕವಾಗಿದ್ದು ನಿಜ, 
  ನಮ್ಮ ಕೂಟದ ಸದಸ್ಯರೊಬ್ಬರ ಪತ್ನಿಯವರಿಗೆ ಹೀಗೆ ಇದ್ದಕ್ಕಿದ್ದಂತೆ ಅನಾರೋಗ್ಯ ಕಾಡಿದಾಗ ಎಲ್ಲರೂ ಮೌನವಾಗಿ ದೈವಕ್ಕೆ ಮೊರೆಯಿಟ್ಟದ್ದು ಸುಳ್ಳಲ್ಲ. ಆದರೆ ದೇವರು ಈ ರೂಪದಲ್ಲಿ ಇಷ್ಟು ಬೇಗ ಕರುಣೆ ತೋರಿದ ಎಂದರೆ ಇದು ಕಥೆ ಅಲ್ಲ... ಕಟುಸತ್ಯ.. ಆ ದೈವ ರೂಪವೇ ಭಾರತೀಯ ಯೋಗ ಪದ್ಧತಿ...... ಕೂಟದ ಅಧ್ಯಕ್ಷರಾದ ಶ್ರೀ ನಾ.ನಾರಾಯಣರವರು ಸಮಾರಂಭದಲ್ಲಿ ಭಾಗವಹಿಸಿ ಯೋಗಾಸನಗಳ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ಆ ಅದ್ಭುತ ದೃಶ್ಯಗಳು ನಿಮ್ಮ ಮುಂದೆ...