ಶುಕ್ರವಾರ, ಜನವರಿ 30, 2015

ಕೂಟದ ಅಳಿಲು ಸೇವೆಗೆ ಕೃತಜ್ಞತೆ ಹೇಳೋಣ ಬನ್ನಿ!

       ದಿನಾಂಕ-24-01-2015 ರಂದು "ಸೌಹಾರ್ದಕೂಟ ಹಾಗೂ ಅದರ ಅಧ್ಯಕ್ಷರಾದ ಶ್ರೀ ನಾ.ನಾರಾಯಣ ಮತ್ತು ಸದಸ್ಯರಾದ ಶ್ರೀ ಎನ್.ಗೋವಿಂದರಾವ್ ರವರ" ಆರ್ಥಿಕ ಸಹಭಾಗಿತ್ವದಲ್ಲಿ,  ನೂತನವಾಗಿ ನಿರ್ಮಾಣಗೊಂಡಿರುವ ಶಾಲಾ ಮಕ್ಕಳಿಗಾಗಿ “ಕುಡಿಯುವ/ಕೈ ತೊಳೆಯುವ ನೀರು ಮತ್ತು ಮೇಲ್ಛಾವಣಿಯುಳ್ಳ “ ಮಿನಿ ಕಟ್ಟಡವನ್ನು ಶಾಲೆಗೆ ಹಸ್ತಾಂತರಿಸುವ ಕಾರ್ಯಕ್ರಮದ ಒಂದು ನೋಟ,
ದಿ||24-01-2015 ರ ಶನಿವಾರ ಬೆಳಗಿನ 10 ಗಂಟೆಗೆ ಹೆಚ್.ಡಿ.ಕೋಟೆ ಶಾಲೆಯಲ್ಲಿ ನಡೆದ ಸಮಾರಂಭದ ದೃಶ್ಯಗಳು
ಕೂಟದ ಅಳಿಲು ಸೇವೆ
 






























































ಅಧ್ಯಕ್ಷರಾದ ಶ್ರೀ ನಾ.ನಾರಾಯಣರವರಿಂದ ಉದ್ಘಾಟನೆ

ಶಾಲಾ ಮುಖ್ಯಸ್ಥರಿಂದ ದೀಪ ಬೆಳಗಿಸುವಿಕೆ

ಅಧ್ಯಕ್ಷರಾದ ಶ್ರೀ ನಾ.ನಾರಾಯಣರವರಿಗೆ ಸನ್ಮಾನ
ಕೂಟದ ಪರವಾಗಿ ಗೌರವ ಸ್ವೀಕರಿಸುತ್ತಿರುವ ಅಧ್ಯಕ್ಷರು
ಅಧ್ಯಕ್ಷರಿಂದ ಮಕ್ಕಳಿಗೆ ಹಿತನುಡಿ



ಸಮಾರಂಭದಲ್ಲಿ ಹಿರಿಯ ಸದಸ್ಯೆಯರಾದ ಶ್ರೀಮತಿ ಕೃಷ್ಣವೇಣಿ ಮತ್ತು ಶ್ರೀಮತಿ ಶಾಂತಮ್ಮ



































































        ದಿ|| ಶ್ರೀ ನಾಗಪ್ಪನವರ ಶತಮಾನೋತ್ಸವ ವರ್ಷದ ನೆನಪಿನಲ್ಲಿ ಶ್ರೀಯುತರು ಓದಿದ ಶಾಲೆಗೆ ಕುಡಿಯುವ/ಕೈ ತೊಳೆಯುವ ನೀರು ಮತ್ತು ಮೇಲ್ಛಾವಣಿ ಹಾಕಿಸುವ ಕೆಲಸವನ್ನು ಕೂಟದ ಸದಸ್ಯರಾದ ಮೈಸೂರಿನ ಶ್ರೀ ಮಧುಸೂದನ್ ರವರು ಉಸ್ತುವಾರಿ ವಹಿಸಿ ಹಾಗೂ  ಮನ:ಪೂರ್ವಕ ತೊಡಗಿಸಿಕೊಂಡು ಪೂರ್ಣಗೊಳಿಸಿಕೊಟ್ಟಿದ್ದಕ್ಕಾಗಿ ಕೂಟವು ಶ್ರೀಯುತರಿಗೆ ಆಭಾರಿಯಾಗಿರುತ್ತದೆ. ಕೂಟದ ಎಲ್ಲ ಬಂಧುಗಳ ಪರವಾಗಿ ಅವರಿಗೆ ಧನ್ಯವಾದ ಸಲ್ಲಿಸ ಬಯಸುತ್ತದೆ.

      ಸೌಹಾರ್ದಕೂಟವು ಹೀಗೊಂದು ಯೋಜನೆ ಹಮ್ಮಿಕೊಂಡಾಗ ಅದಕ್ಕೆ ಪೂರಕವಾಗಿ ಮತ್ತು ಆರ್ಥಿಕವಾಗಿ ಸ್ಪಂದಿಸಿದ ಕೂಟದ ಅಧ್ಯಕ್ಷರಾದ ಶ್ರೀ ನಾ.ನಾರಾಯಣ ಮತ್ತು ಸದಸ್ಯರಾದ ಶ್ರೀ ಎನ್.ಗೋವಿಂದರಾವ್ ರವರಿಗೆ ಕೂಟವು ಹೃತ್ಪೂರ್ವಕ
ಕೃತಜ್ಞತೆಗಳನ್ನು ಸಲ್ಲಿಸುತ್ತದೆ.

   ಇದೇ ಸಂದರ್ಭದಲ್ಲಿ ಕೂಟದ ಹಿರಿಯ ಸದಸ್ಯೆಯರಾದ ಶ್ರೀಮತಿ ಕೃಷ್ಣವೇಣಿಯವರು ಹೆಚ್.ಡಿ.ಕೋಟೆ ಶಾಲೆಗೆ 10ಸಾವಿರ ರೂ ದೇಣಿಗೆ ನೀಡಿರುತ್ತಾರೆ. ಕೂಟದಿಂದ ಅವರಿಗೆ ಅಭಿನಂದನೆಗಳು.

 ಎಲೆಮರೆ ಹಣ್ಣಿನಂತೆ ಕೂಟದ ಎಲ್ಲ ಚಟುವಟಿಕೆಗಳ ಹಿಂದಿನ ರೂವಾರಿಗಳು ಹಾಗೂ ಕೂಟದ ಹಿರಿಯ ಸದಸ್ಯರೂ ಆದ ಶ್ರೀ ಹೆಚ್.ಕೃಷ್ಣಮೂರ್ತಿಯವರಿಗೆ ವಿಶೇಷ ಧನ್ಯವಾದಗಳನ್ನು ತಿಳಿಸುತ್ತಾ, ಪ್ರತ್ಯಕ್ಷವಾಗಿ ಪರೋಕ್ಷವಾಗಿ ಈ ಸಂಬಂಧ ಸಹಕರಿಸಿದ ಎಲ್ಲರಿಗೂ ಕೂಟವು ಧನ್ಯವಾದಗಳನ್ನು ಸಲ್ಲಿಸಬಯಸುತ್ತದೆ.